'ಮ್ಯಾಕ್ಸ್ ಪ್ಲಾಂಕ್' (೧೮೫೮-೧೯೪೭) ಜರ್ಮನಿಯ ಭೌತಶಾಸ್ತ್ರಜ್ಞ. ಕ್ವಾಂಟಮ್ ತತ್ವದ ಪ್ರತಿಪಾದಕ,ವಿಕಿರಣಶೀಲತೆಯ ನಿಯಮಗಳನ್ನು ನಿರೂಪಿಸಿದವರು.ಇವರು ಜರ್ಮನಿಯ ಕೀಲ್ ಪಟ್ಟಣದಲ್ಲಿ ಜನಿಸಿದರು.ಇವರಿಗೆ ೧೯೧೮ ರಲ್ಲಿ ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ದೊರೆಯಿತು. == ಜೀವನ == ಮ್ಯಾಕ್ಸ್ ಪ್ಲಾಂಕ್, ಪರಮಾಣುವನ್ನು ಜಗತ್ತಿಗೆ ಪರಿಚಯಿಸಿದ ಖ್ಯಾತ ವಿಜ್ಞಾನಿ. ಇವರು ೧೮೫೮, ಏಪ್ರಿಲ್ ೨೩ ರಂದು ಡೇನಿಪ್ ರೇವು ಕೀಲ್ ಎಂಬ ಪ್ರದೇಶದಲ್ಲಿ ಜನಿಸಿದರು. ಇವರ ತಂದೆ ತಾಯಿ ಮೂಲತಃ ಜರ್ಮನಿಯವರು. ಮ್ಯಾಕ್ಸ್ ಪ್ಲಾಂಕ್ ರ ತಂದೆ ನ್ಯಾಯಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು. ಹೀಗಾಗಿ ಮುಂದೆ ಇವರ ತಂದೆಗೆ ವರ್ಗಾವಣೆ ಯಾದಾಗ ಕುಟುಂಬ ಸಮೇತ ಇವರು ಮ್ಯೂನಿಚ್ ಗೆ ಬರಬೇಕಾಯಿತು. ಗಣಿತ ವಿಷಯದಲ್ಲಿ ತುಂಬಾ ಆಸಕ್ತಿ ಹೊಂದಿದ್ದ ಮ್ಯಾಕ್ಸ್ ಪ್ಲಾಂಕ್, ಮುಂದೆ ಮ್ಯೂನಿಚ್ ಮತ್ತು ಬರ್ಲಿನ್ ವಿಶ್ವವಿದ್ಯಾನಿಲಯಗಳಲ್ಲಿ ಉನ್ನತ ವ್ಯಾಸಂಗ ಮಾಡಿದರು. == ಸಾಧನೆ == ಇವರು ಪರಮಾಣು ಜಗತ್ತಿಗೆ ಕ್ರಮಬದ್ಧ ವಿಧಾನದ ಮೂಲಕ ಅಧ್ಯಯನ ಮಾಡಲು ಬಲವಾದ ಅಡಿಪಾಯ ಹಾಕಿದರು. ಒಂದು ವಸ್ತು ಯಾವ ರೀತಿ ಪರಮಾಣು ಗುಂಪಾಗಿದೆಯೋ ಅದರಂತೆ ಶಕ್ತಿಯ ಕಟ್ಟುಗಳ ಸಂಕೀರ್ಣ ಅಥವಾ ಗುಂಪು ಎಂದು ಜಗತ್ತಿಗೆ ತಿಳಿಸಿಕೊಟ್ಟರು. ಇವರು ಶಕ್ತಿಯ ಮಾಪನಕ್ಕೆ = ಎಂಬ ಸರಳ ಸೂತ್ರ ನೀಡಿದರು. ಶಕ್ತಿಯ ಪೊಟ್ಟಣ, ಇದಕ್ಕೆ ಕಾರಣವಾದ ಆವೃತ್ತಿ, ಇವುಗಳ ಅಣುಧಾತು. ಒಂದು ನಿಯತಾಂಕ ಎಂದು ಪ್ಲಾಂಕ್ ಪ್ರತಿಪಾದಿಸಿದರು. Eಯನ್ನು ಅವರು ಕ್ವಾಂಟಮ್ ಎಂದು ಕರೆದರು. ಕ್ವಾಂಟಮ್ ಸಿದ್ಧಾಂತದ ಜನಕ ಮ್ಯಾಕ್ಸ್ ಪ್ಲಾಂಕ್ ೧೯೪೭, ಅಕ್ಟೋಬರ್ ೩ ರಂದು ವಿಧಿವಶರಾದರು. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == 2006-08-28 ವೇಬ್ಯಾಕ್ ಮೆಷಿನ್ ನಲ್ಲಿ. – Encyclopædia – .--. - 2009-04-06 ವೇಬ್ಯಾಕ್ ಮೆಷಿನ್ ನಲ್ಲಿ., - , 1942 –– – 50th '